ಕರ್ನಾಟಕ     ಬೆಂಗಳೂರು     ಶಿವಾರಪಟ್ಟಣ


ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು.

ಶಿವಾರಪಟ್ಟಣ ಸಮುದಾಯದ ಬಗ್ಗೆ:-

ಶಿವಾರಪಟ್ಟಣ ಸಮುದಾಯವು ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯಡಿ ಬರುತ್ತದೆ.

ಶಿವಾರಪಟ್ಟಣ ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 100ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 12 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ.  ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ.

ಕಲ್ಲು ಕೆತ್ತನೆಯ ಕುಶಲಕರ್ಮ:-

ಕಲ್ಲು ಕೆತ್ತನೆಯು ಒಂದು ಪ್ರಾಚೀನ ಕ್ರಿಯೆಯಾಗಿದ್ದು, ಅದರಲ್ಲಿ ಕಲ್ಲನ್ನು ನಿಯಂತ್ರಿತವಾಗಿ ತೆಗೆಯುವುದರ ಮೂಲಕ ಗಡುಸಾದ ನೈಸರ್ಗಿಕ ಕಲ್ಲಿನ ಚೂರುಗಳಿಗೆ ಆಕಾರವನ್ನು ನೀಡಲಾಗುತ್ತದೆ. ಕಲ್ಲಿನ ಶಾಶ್ವತೆಯ ಕಾರಣ, ಪುರಾತನ ಸಮಾಜಗಳೂ ಸಹ ಕೆಲವು ರೀತಿಯ ಕಲ್ಲಿನ ಕೆಲಸಗಳಲ್ಲಿ ನಿರತವಾಗಿದ್ದವು ಎಂಬುದಕ್ಕೆ ಪುರಾವೆಗಳಿವೆ.

ಕಿಡಿಗಲ್ಲುಗಳನ್ನು ಮಾಡಲು ಹಳೆ ಶಿಲಾಯುಗದ ಸಮಾಜಗಳು ನಡೆಸುತ್ತಿದ್ದ ಕ್ರಿಯೆಗಳಿಗೆ ನ್ಯಾಪಿಂಗ್ ಎಂದು ಕರೆಯುತ್ತಾರೆ. ಸುಂದರ ಬರಹಕ್ಕಾಗಿ ಮಾಡುವ ಕಲ್ಲಿನ ಕೆತ್ತನೆಯನ್ನು ಲೆಟರಿಂಗ್ ಎಂದು ಕರೆಯುತ್ತಾರೆ.

ಹಾಲುಗಲ್ಲಿನ ಗಣಿಗಾರಿಕೆಗಿಂತ ಕಲ್ಲಿನ ಕೆತ್ತನೆಯು ಭಿನ್ನವಾಗಿರುವುದೆಂದರೆ ಅದು ಕಲ್ಲಿಗೆ ಆಕಾರ ಕೊಡುವ ಅಥವಾ ಕೊರೆಯುವ ಕೆಲಸವಾದರೆ, ಗಣಿಗಾರಿಕೆಯು, ಭೂವಿಜ್ಞಾನ ಮೂಲಗಳಿಂದ, ಸಾಮಾನ್ಯವಾಗಿ ಬಂಡೆಗಳಲ್ಲಿ, ಉಪಯುಕ್ತ ಕಲ್ಲನ್ನು ಪಡೆಯುವ ಕ್ರಿಯೆಯಾಗಿದೆ.

ಕಲ್ಲು ಕೆತ್ತನೆ ಎಂಬ ಪದವು ಶಿಲ್ಪಿಗಳಿಗೆ ಅನ್ವಯಿಸುವ ಪ್ರಮುಖ ಪದವಾಗಿದ್ದು, ಜೇಡಿ ಮಣ್ಣಿನಲ್ಲಿ ವಿನ್ಯಾಸ ಮಾಡುವುದು ಅಥವಾ ಆಕಾರ ಕೊಡುವುದೆಂಬುದಕ್ಕೆ ವಿರುದ್ಧವಾಗಿ, ಶಿಲೆಗಳನ್ನು ಕೆತ್ತುವ ಒಂದು ನಿರ್ದಿಷ್ಟ ವಿಧಾನ ಎಂಬ ಅರ್ಥವನ್ನು ನೀಡುತ್ತದೆ. ಈ ಪದವು ಕಟ್ಟಡದರಿಮೆ, ಕಟ್ಟಡ ಅಥವಾ ಸಿವಿಲ್ ಇಂಜಿನಿಯರಿಂಗಳಲ್ಲಿ ಉಪಯೋಗಿಸುವ, ಕಲ್ಲುಬಂಡೆಗಳನ್ನು ಅಲಂಕರಿಸುವುದಕ್ಕೆ ಕಲ್ಲು ಕುಟಿಗರು ಮಾಡುವ ಕೆಲಸಕ್ಕೂ ಕೂಡ ಅನ್ವಯಿಸುತ್ತದೆ. ಕೆಲವು ವಿಧದ ಬಂಡೆ ಕೆತ್ತನೆಗಳನ್ನು ಮಾಡುವ ಕೆಲಸವನ್ನು ವರ್ಣಿಸಲು ಸಹ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರು ಈ ಪದವನ್ನು ಉಪಯೋಗಿಸುತ್ತಾರೆ.

ಅವಶ್ಯಕ ವಸ್ತುಗಳು ಎಂದರೆ:-

1. ಗಟ್ಟಿ ಗ್ರಾನೈಟ್

2. ಮೃದುವಾದ ಬೂದುಬಣ್ಣದ ಗ್ರಾನೈಟ್

3. ಮೈಸೂರು ಕಲ್ಲು

4. ಬಿಳಿ ಗ್ರಾನೈಟ್

ಕ್ರಿಯೆ:-

ಗಟ್ಟಿ ಗ್ರಾನೈಟ್ ಮೇಲೆ ಕೆಲಸ ಮಾಡುವಾಗ ಕುಶಲಕರ್ಮಿಯು, ಆರಿಸಿದ ಕಲ್ಲಿನ ನೈಸರ್ಗಿಕ ವಿನ್ಯಾಸವನ್ನು ಮೊದಲು ಅಧ್ಯಯಯಿಸುತ್ತಾನೆ. ಆಮೇಲೆ ಜಾಗರೂಕತೆಯಿಂದ ಚಾಣ ಮತ್ತು ಸುತ್ತಿಗೆಗಳಿಂದ ಆಕಾರವನ್ನು ನೀಡಲಾಗುತ್ತದೆ. ಉಷ್ಣ ಉತ್ಪಾದನೆಯಾಗುವುದನ್ನು ತಡೆಯಲು ಸತತವಾಗಿ ನೀರನ್ನು ಚಿಮುಕಿಸಲಾಗುತ್ತದೆ. ಮರಳುಹಾಳೆ ಅಥವಾ ಕಡತಗಳಿಂದ ಉಜ್ಜುವ ಮೂಲಕ ಕಲ್ಲನ್ನು ಮೃದುಗೊಳಿಸಲಾಗುತ್ತದೆ. ಕೆತ್ತಬೇಕಾದ ಚಿತ್ರದ ಹರವುಗಳನ್ನು ಕಲ್ಲಿನ ಪಟ್ಟಿಯ ಮೇಲೆ ಗುರುತಿಸಲಾಗುತ್ತದೆ. ಕಲ್ಲಿನ ಪಟ್ಟಿಯಿಂದ ಅಧಿಕ ತುದಿಗಳನ್ನು ಸುತ್ತಿಗೆಯಿಂದ ಬಡಿಯುವುದರ ಮೂಲಕ ತೆಗೆಯಲಾಗುತ್ತದೆ. ಕಲ್ಲಿನ ದೊಡ್ಡ ಚೂರುಗಳನ್ನು ಸಣ್ಣ ಪಟ್ಟಿಗಳಾಗಿ ಲಂಬವಾಗಿ ಕತ್ತರಿಸಲಾಗುತ್ತದೆ ಮತ್ತು ಅವುಗಳ ಮೇಲೆ ಕರಡು ರೂಪರೇಖೆಯನ್ನು ಮಾಡಲಾಗುತ್ತದೆ. ಒಂದು ಗರಗಸದ ಸಹಾಯದಿಂದ ಕಲ್ಲಿನ ಪಟ್ಟಿಯಿಂದ ವಸ್ತುವನ್ನು ತೆಗೆಯಲಾಗುತ್ತದೆ. ಈ ಪಟ್ಟಿಯನ್ನು ಈಗ ಚಾಣ ಮತ್ತು ಸುತ್ತಿಗೆಯ ಸಹಾಯದಿಂದ ಇಚ್ಛಿಸಿದ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಚೂಪಾದ ಚಾಣದಿಂದ ಚಿಕ್ಕ ಕೆತ್ತನೆಗಳನ್ನು ಮಾಡಲಾಗುತ್ತದೆ. ಒಂದು ಸುತ್ತಿಗೆ ಮತ್ತು ಚಾಣವು ಕಲ್ಲನ್ನು ಇನ್ನೂ ಹೆಚ್ಚಾಗಿ ಮೃದುವಾಗಿಸುತ್ತದೆ. ಕಲ್ಲನ್ನು ಕೆತ್ತುವುದಕ್ಕೆ ಮುನ್ನ ಅದನ್ನು ಹಿಂದಿನ ರಾತ್ರಿ ಕುದಿಯುವ ನೀರಿನಲ್ಲಿ ಇಟ್ಟು, ರಾಸಾಯನಿಕದೊಂದಿಗೆ ಬೆರೆಸಲಾಗುತ್ತದೆ. ಇದು, ಕಲ್ಲಿನ ಮೇಲ್ಮೈಯನ್ನು ಮೃದುಗೊಳಿಸಿ ಬೆಳ್ಳಗಾಗಿಸುತ್ತದೆ. ಮರಳು ಅಥವಾ ಕಾರ್ಬೋರಂಡಂ ಚೂರುಗಳೊಡನೆ ಕಡೆಯದಾಗಿ ಹೊಳಪು ನೀಡಲಾಗುತ್ತದೆ. ಬಹಳಷ್ಟು ಕೆತ್ತನೆಗಳಿಗೆ ಬಣ್ಣವನ್ನು ಬಳಿಯಲಾಗಿರುತ್ತದೆ. ಮಿಕ್ಕವುಗಳಿಗೆ ಕನ್ನಡಿಗಳು, ಹಿತ್ತಾಳೆಯ ಅಡಕ ಇತ್ಯಾದಿಗಳನ್ನು ಸೇರಿಸಲಾಗಿರುತ್ತದೆ.

ಒಂದು ಮೂರ್ತಿಯನ್ನು ಕೆತ್ತುವಾಗ, ಕಲ್ಲುಕೆತ್ತುಗನು ಕಲ್ಲಿನ ಪಟ್ಟಿಯ ಮೇಲೆ ಶಿಲೆಯ ಒಂದು ಕರಡು ರೂಪರೇಖೆಯನ್ನು ರಚಿಸುತ್ತಾನೆ. ಕಲ್ಲುಕೆತ್ತುಗರು, ತಮ್ಮ ಕೆಲಸದ ಸಮಯದಲ್ಲಿ ನೀರನ್ನು ಚಿಮ್ಮುತ್ತಾರೆ ಏಕೆಂದರೆ ಅನಗತ್ಯ ವಸ್ತುಗಳನ್ನು ಚಾಣದಿಂದ ನಿರಂತರವಾಗಿ ತೆಗೆಯುವಾಗ ಉಂಟಾಗುವ ಘರ್ಷನೆಯಿಂದ ಉಪಕರಣಗಳು ಬಿಸಿಯಾಗುತ್ತವೆ. ಮರಳುಹಾಳೆ, ಮುಲ್ತಾನಿ ಮಟ್ಟಿ ಅಥವಾ ಜೇಡಿ, ಎಣ್ಣೆ ಅಥವಾ ಬಟ್ಟೆಗಳಂತಹ ವಿಭಿನ್ನ ವಿಧಗಳಿಂದ ಮೆರುಗನ್ನು ನೀಡಲಾಗುತ್ತದೆ.

ನಿರ್ದಿಷ್ಟ ಗಾತ್ರಕ್ಕೆ ಕತ್ತರಿಸಲಾದ ಗಟ್ಟಿಯಾದ ಅಥವಾ ಮೃದುವಾದ ಕಲ್ಲಿನ ಮೇಲೆ ಒಂದು ನಕ್ಷೆಯನ್ನು ಬರೆಯಲಾಗುತ್ತದೆ. ಆಕಾರವನ್ನು ಸೂಚಿಸುವ ನಕ್ಷೆಯನ್ನು ಕೆತ್ತಿದ ಮೇಲೆ, ಅನವಶ್ಯಕ ಭಾಗಗಳನ್ನು ತೆಗೆಯುವುದರ ಮೂಲಕ, ಅಂತಿಮ ರೂಪವನ್ನು ನೀಡಲಾಗುತ್ತದೆ. ಗಟ್ಟಿಯಾದ ಕಲ್ಲುಗಳ ಅಧಿಕ ವಸ್ತುಗಳನ್ನು ಚಾಣದಿಂದ ತೆಗೆದರೆ, ಮೃದುವಾದ ಕಲ್ಲುಗಳಿಗೆ ಇದನ್ನು ಚೂಪಾದ ಚಪ್ಪಟೆ-ತುದಿಯ ಕಬ್ಬಿಣದ ಸಾಧನದಿಂದ ಕೆರೆಯುವ ಮೂಲಕ ತೆಗೆಯಲಾಗುತ್ತದೆ.

 ಕಾರ್ಯವಿಧಾನಗಳು:-

ಕೆತ್ತನೆಯ ಕ್ರಿಯೆಯಲ್ಲಿ ಕೆಳಗಿನ ಅನುಕ್ರಮವನ್ನು ಅನುಸರಿಸಲಾಗುತ್ತದೆ: ಕಲ್ಲು ಮತ್ತು ರೂಪುರೇಖೆಗಳನ್ನು ಆರಿಸುವುದು, ಮೂಲಭೂತ ಆಕಾರವನ್ನು ಪಡೆಯಲು ಕರಡು ಅಲಂಕರಣದ ಮೂಲಕ ವಸ್ತುವನ್ನು ತೆಗೆಯುವುದು, ವಿವರಗಳನ್ನು ಬಣ್ಣಿಸಲು ಮೃದು/ಚಪ್ಪಟೆಯಾಗಿ ಅಲಂಕರಿಸುವುದು, ಮೇಲ್ಮೈಯನ್ನು ಅಡಕಗೊಳಿಸುವುದು, ವಿವಿಧ ಚಾಣೆ ಕಲ್ಲುಗಳಿಂದ ಮೇಲ್ಮೈಯನ್ನು ಮೆರುಗುಗೊಳಿಸುವುದು ಮತ್ತು ಕೊನೆಗೆ ನೀರು ಮತ್ತು ಎಮೆರಿ ಹಾಳೆಗಳಿಂದ ಮೆರುಗು ನೀಡುವುದು.

ಮುಖ್ಯ ತಾಂತ್ರಿಕತೆಗಳು ಕೆಳಗಿನಂತೆ ಇವೆ:-

1. ಕತ್ತರಿಸುವುದು

2. ರುಬ್ಬುವುದು

3. ಹದಗೊಳಿಸುವುದು

4. ಮೆರುಗುಗೊಳಿಸುವುದು

ಹೇಗೆ ತಲುಪುವುದು:-

ವಾಯು ಸಂಪರ್ಕ:-

ಕೋಲ್ಕತ್ತಾ, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಮತ್ತು ಅಹಮದಾಬಾದ್ ಮುಂತಾದ ಪ್ರಮುಖ ನಗರಗಳಿಗೆ ಬಹುಸಂಖ್ಯೆಯಲ್ಲಿ ದೈನಂದಿನ ವಿಮಾನಗಳು ಲಭ್ಯವಿದೆ. ಬೆಂಗಳೂರಿನಲ್ಲಿ ಎಲ್ಲಾ ಅಂತರ್ರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಕಛೇರಿಗಳಿವೆ. ಬಹಳಷ್ಟು ನೇರ ಅಂತರ್ರಾಷ್ಟ್ರೀಯ ವಿಮಾನಗಳು ಬೆಂಗಳೂರನ್ನು ಸಿಂಗಾಪುರ, ಮಸ್ಕಟ್ ಮತ್ತು ಶಾರ್ಜಾಗಳೊಂದಿಗೆ ಸಂಪರ್ಕಿಸುತ್ತವೆ. ಬೆಂಗಳೂರಿನ ವಿಮಾನ ನಿಲ್ದಾಣವು ನಗರ ಕೇಂದ್ರ ನಿಲ್ದಾಣದಿಂದ ಪೂರ್ವಕ್ಕೆ 13 ಕಿಲೋಮೀಟರುಗಳ ದೂರದಲ್ಲಿದೆ.

ರಸ್ತೆ ಸಂಪರ್ಕ-

ಬೆಂಗಳೂರು ಒಂದು ದೊಡ್ಡ ಬಸ್ ನಿಲ್ದಾಣವನ್ನು ಹೊಂದಿದ್ದು, ಅದು ರೈಲ್ವೆ ನಿಲ್ದಾಣದ ಅತಿ ಸನಿಹದಲ್ಲಿದೆ. ಬೆಂಗಳೂರನ್ನು ಹೈದರಾಬಾದ್, ಮೈಸೂರು, ಮುಂಬೈ, ಹೊಸಪೇಟೆ ಮತ್ತು ಚೆನ್ನೈಗಳೊಂದಿಗೆ ಸಂಪರ್ಕಿಸಲು, ಚೆನ್ನಾಗಿ ಅಭಿವೃದ್ದಿಯಾದ ರಸ್ತೆಗಳ ಜಾಲವಿದೆ. ಬೆಂಗಳೂರಿನ ಸುಂದರ ಪ್ರದೇಶಗಳನ್ನು ನೋಡಲು ಅನುವುಮಾಡಿಕೊಡಲು, KSRTCಯು ವ್ಯವಸ್ಥಿತ ಬಸ್ಸುಗಳನ್ನು ಕಾರ್ಯಗತಗೊಳಿಸಿದೆ. ನಗರದಲ್ಲಿನ ಮುಖ್ಯ ಬಸ್ ನಿಲ್ದಾಣವು ನಗರ ರೈಲ್ವೆ ನಿಲ್ದಾಣದ ಎದುರಲ್ಲೇ ಇದೆ. ಮತ್ತು ಪಕ್ಕದ ರಾಜ್ಯಗಳು ಕೂಡ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ನಗರದ ಸುತ್ತ ಬಹಳಷ್ಟು ಸಂಖ್ಯೆಯಲ್ಲಿ ಯಾತ್ರೆಗಳನ್ನು ಮತ್ತು ವಿಹಾರಗಳನ್ನು ಆಯೋಜಿಸುತ್ತದೆ.

ರೈಲು ಸಂಪರ್ಕ:-

ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರಿನ ಮುಖ್ಯ ನಿಲ್ದಾಣವಾಗಿದೆ. ಅದು ಎಲ್ಲಾ ಪ್ರಮುಖ ಭಾರತೀಯ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಭಾರತದ ಇತರ ನಗರಗಳಿಗೆ ಪ್ರತಿದಿನವೂ ಬಹಳಷ್ಟು ಎಕ್ಸ್ ಪ್ರೆಸ್ ರೈಲುಗಳಿವೆ . ಬೆಂಗಳೂರು, ಪ್ರಮುಖ ಭಾರತೀಯ ನಗರಗಳಿಗೆ ಉತ್ತಮ ರೈಲಿನ ಸಂಪರ್ಕ ಹೊಂದಿದೆ. ಶತಾಬ್ಧಿ, ಬೃಂದಾವನ & ಲಾಲಭಾಗ್ ಎಕ್ಸ್ ಪ್ರೆಸ್ ನಂತಹ ಸೂಪರ್ ಫಾಸ್ಟ್ ರೈಲುಗಳು ಬೆಂಗಳೂರನ್ನು ಚೆನ್ನೈಗೆ ಸಂಪರ್ಕಿಸುತ್ತವೆ.








ಕರ್ನಾಟಕ     ಬೆಂಗಳೂರು     ಕಾದಂಬರಿ